ನಮ್ಮ ದೇಶದಲ್ಲಿ
ಕೆಲವೊಂದು
ಮತ/ಪಂಗಡಗಳನ್ನು ಅಲ್ಪಸಂಖ್ಯಾತ
ವರ್ಗದಲ್ಲಿ ಗುರುತಿಸಿರುವುದು
ನಮಗೆಲ್ಲಾ ತಿಳಿದಿರುವ
ವಿಷಯವಾಗಿದೆ. ಹೀಗೆ ಈ
ವರ್ಗದಲ್ಲಿ ಗುರುತಿಸಿರುವ ಮತ/ಪಂಗಡಗಳ ಜನರಿಗೆ
ಸರಕಾರ ವಿಶೇಷ ಸವಲತ್ತುಗಳನ್ನು ನೀಡಿ
ಅವರ ಅಭ್ಯುದಯಕ್ಕಾಗಿ ಶ್ರಮಿಸುತ್ತಿದೆ (?). ಸಮಾಜದಲ್ಲಿ ಹಿಂದುಳಿದವರ
ಅಭಿವೃದ್ಧಿ
ಬಗೆಗಿನ ಕಾಳಜಿಯಿಂದ ಇಂತಹ
ಕಾರ್ಯಕ್ರಮಗಳನ್ನು ಆರಂಭಿಸಿದ್ದರೂ
ಕಾಲಕ್ರಮೇಣ
ಇದು ರಾಜಕೀಯ ಲಾಭದ ವಸ್ತುವಾಗಿ ರುವುದು ದುರಂತ. . ಅಲ್ಲದೆ ಅಲ್ಪಸಂಖ್ಯಾತ
ಸ್ಥಾನಮಾನ
ನೀಡುವ ಸಂದರ್ಭದಲ್ಲಿ
ಇದ್ದ ಸ್ಥಿತಿಗೂ ಈಗಿನ ಸ್ಥಿತಿಗೂ
ಅಜಗಜಾಂತರ ವ್ಯತ್ಯಾಸವಿದೆ. ಆದುದರಿಂದ ಸಂಬಂಧಪಟ್ಟ
ಇಲಾಖೆಯಿಂದ
ಈ ಕೆಳಗಿನ ಪ್ರಶ್ನೆಗಳಿಗೆ
ವಿವರಣೆಯನ್ನು ಬಯಸುತ್ತೇನೆ.
- ಯಾವುದೇ ಮತ/ಪಂಗಡವನ್ನು ಅಲ್ಪಸಂಖ್ಯಾತ
ವರ್ಗದಲ್ಲಿ ಗುರುತಿಸಲು
ಬಳಸಿರುವ
ಮಾನದಂಡವೇನು?
- ಬಳಸಿರುವ ಮಾನದಂಡದ ಪರಾಮರ್ಶೆಯನ್ನು ಕಾಲಕಾಲಕ್ಕೆ ಮಾಡಲಾಗುತ್ತಿದೆಯೇ?
- ಈ ಗುರುತಿಸುವಿಕೆ
ಜನಸಂಖ್ಯೆಯ ಆಧಾರದಲ್ಲಿ
ನಡೆದಿರುವುದೆ? ಹಾಗಾದಲ್ಲಿ ಅಲ್ಪಸಂಖ್ಯಾತ
ವರ್ಗದಲ್ಲಿ ಗುರುತಿಸಲು
ಇರುವ ಗರಿಷ್ಟ ಶೇಕಡಾವಾರು ಜನಸಂಖ್ಯಾ ಮಿತಿ ಏನು?